ಪೆನ್ನಾರ್ -
ಕರ್ನಾಟಕ ರಾಜ್ಯದಲ್ಲಿ ಚಿಕ್ಕಬಳ್ಳಾಪುರಕ್ಕೆ 11 ಕಿ.ಮೀ. ಪಶ್ಚಿಮ ನೈಋತ್ಯದಲ್ಲಿ ಹುಟ್ಟುವ ಸಣ್ಣ ನದಿ.  560 ಕಿ.ಮೀ. ಉದ್ದದ ಈ ನದಿ ಉತ್ತರಾಭಿಮುಖವಾಗಿ ಹರಿದು ಆಂಧ್ರ ಪ್ರದೇಶವನ್ನು ಪ್ರವೇಶಿಸಿ ಪೂರ್ವ-ಆಗ್ನೇಯಕ್ಕೆ ತಿರುಗಿ ಕೋರಮಂಡಲ್ ತೀರದಲ್ಲಿ ನೆಲ್ಲೂರಿಗೆ 24 ಕಿ.ಮೀ. ದೂರದಲ್ಲಿ ಬಂಗಾಳ ಕೊಲ್ಲಿಯನ್ನು ಸೇರುತ್ತದೆ.  ಇದು ಮಳೆಗಾಲದಲ್ಲಿ ಮಾತ್ರ ರಭಸದ ಪ್ರವಾಹವಾಗಿದ್ದು ಉಳಿದ ಕಾಲದಲ್ಲಿ ಸಣ್ಣ ತೊರೆಯಾಗಿ ಹರಿಯುತ್ತದೆ.
(ಜೆ.ಎಸ್.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ